ನನ್ನ ಬಗ್ಗೆ ಒಂಚೂರು…
- ಚಾಮರಾಜ ಸವಡಿ
- ಕೊಪ್ಪಳ (ಮೊಕ್ಕಾಂ: ಬೆಂಗಳೂರು), ಕರ್ನಾಟಕ, India
- ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಅಳವಂಡಿ ಎಂಬ ಸಣ್ಣ ಊರಲ್ಲಿ ಹುಟ್ಟಿದ ನಾನು ೧೯ ವರ್ಷಗಳವರೆಗೆ ಹುಬ್ಬಳ್ಳಿಗಿಂತ ದೊಡ್ಡ ಊರನ್ನೇ ನೋಡಿದ್ದಿಲ್ಲ.
- ಮುಂದೆ ಬದುಕು ಅರ್ಧ ಭಾರತವನ್ನು ಸುತ್ತು ಹಾಕಿಸಿತು. ಹತ್ತಾರು ನೌಕರಿಗಳನ್ನು ಮಾಡಿಸಿತು. ಅತಿ ಭಾವುಕತೆ ಅತ್ಯಂತ ದೊಡ್ಡ ದೌರ್ಬಲ್ಯ ಎಂಬುದು ಅರ್ಥವಾಗುವ ಹೊತ್ತಿಗೆ ನಾನು ೧೦ನೇ ಕೆಲಸ ಬಿಟ್ಟಿದ್ದೆ ಹಾಗೂ ಮದುವೆಯಾಗಿ ಕೇವಲ ಎರಡೇ ತಿಂಗಳಾಗಿದ್ದವು.
- ಜೀವನದ ಸ್ಮರಣೀಯ ಕ್ಷಣಗಳನ್ನು ದಾಖಲಿಸುವುದು, ನೈಸರ್ಗಿಕ-ಸಹಜ ಕೃಷಿ, ಸಾಹಿತ್ಯ, ಆರೋಗ್ಯ, ಅಭಿವೃದ್ಧಿ ಪತ್ರಿಕೋದ್ಯಮ, ಮಾನವಿಕ ಸಂಬಂಧಗಳು, ಹಾಗೂ ಎಲ್ಲಕ್ಕಿಂತ ಮುಖ್ಯ, ತಮ್ಮ ವೈಯಕ್ತಿಕ ಪ್ರಗತಿಯನ್ನೂ ಅಲಕ್ಷಿಸಿ ಜನರು ಇನ್ನೊಬ್ಬರ ಕಾಲೆಳೆಯಲು ಏಕೆ ಆಸಕ್ತಿ ತೋರುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ನನ್ನ ಮೂಲಭೂತ ಆಸಕ್ತಿಗಳಲ್ಲಿ ಕೆಲವು!!
- ಸದ್ಯ ’ಸುವರ್ಣ ಸುದ್ದಿ ಚಾನಲ್’ನಲ್ಲಿ ಕೆಲಸ ಮಾಡುತ್ತಿದ್ದೇನೆ. ಉಳಿದಂತೆ, ನನ್ನ ಬಗ್ಗೆ ಬ್ಲಾಗ್ನನಲ್ಲಿ ಬಂದ ಬರಹಗಳು ಹೇಳುತ್ತವೆ.
Like this:
Be the first to like this page.
Recent Comments